ಅಭಿಪ್ರಾಯ / ಸಲಹೆಗಳು

ಗ್ಯಾಲರಿ

 

2020-21 ಸಾಲಿನಲ್ಲಿ ನಿಗಮದ ಕಲಬುರಗಿ-1, ಕುರುಗೋಡು ಮತ್ತು ವಿಜಾಪುರ-3 ಘಟಕಗಳ ಕೆಎಂಪಿಎಲ್ ಸಾಧನೆಗಾಗಿ Petroleum Conservation Research Organisation ವತಿಯಿಂದ "Best Depot Awards at State Level on Fuel Conservation" SAKSHAM-2022ರ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುತ್ತದೆ
 

 

ಸಂಸ್ಥೆಯಲ್ಲಿ ಆಯೋಜಿಸಲಾದ "ಕೋವಿಡ್ - ಸೂಕ್ತ ವರ್ತನೆ" ಕುರಿತು ಆನ್‌ಲೈನ್ ತರಬೇತಿ ಯನ್ನು ಮಾನ್ಯ ಅಧ್ಯಕ್ಷರು ಉದ್ಘಾಟಿಸಿದರು. ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಪ್ರಮುಖ ವಿಷಯಗಳ ಕುರಿತು ವಿವರಿಸಿದರು. ನಿಗಮದಾದ್ಯಂತ ಸುಮಾರು 700 ಉದ್ಯೋಗಿಗಳು ಭಾಗವಹಿಸಿದ್ದರು.
 

 

 

 

ಈ.ಕ.ರ.ಸಾ. ಸಂಸ್ಥೆಯ ವಿವಿಧ ವಿಭಾಗ/ ಘಟಕಗಳಲ್ಲಿ ಸಸಿ ನೆಡುವ ಮೂಲಕ "ವಿಶ್ವ ಪರಿಸರ ದಿನಾಚರಣೆ" ಆಚರಿಸಲಾಯಿತು.

        

 

ದಿ.18.03.2021 ರಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಬೀದರ ವಿಭಾಗದ ಭಾಲ್ಕಿ ಬಸ್ ನಿಲ್ದಾಣ, ಘಟಕ ಮತ್ತು ಔರಾದ್ ಬಸ್ ನಿಲ್ದಾಣ , ಘಟಕಕ್ಕೆ ಭೇಟಿ ನೀಡಿ ಎಲ್ಲ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ ಭಾಲ್ಕಿ ಮತ್ತು ಔರಾದ್ ಘಟಕದ ನಿಯಮಿತತೆ, ಸಾರಿಗೆ ಆದಾಯ ,ಕೆ.ಎಂ.ಪಿ.ಎಲ್ ಹೆಚ್ಚಿಸಿ, ರದ್ದತಿ ಪ್ರಮಾಣ, ಅವಘಡ ಕಡಿಮೆ ಮಾಡಲು ತಿಳಿಸಿದರು.
 

 

ಈ.ಕ.ರ.ಸಾ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕಲಬುರಗಿ ನಗರದ ಪುರಸಭೆಯ ಆಯುಕ್ತರೊಂದಿಗೆ  ನಗರದಲ್ಲಿ “ಬಿ.ಆರ್.ಟಿ.ಎಸ್‌ ಲೈಟ್”‌ ಯೋಜನೆಯ ರೂಪುರೇಷೆಗಳ ಕುರಿತು ಪರಿಶೀಲಿಸಿದರು.

 

 

ದಿ.18.02.2021 ರಂದು ಮಾನ್ಯ ಸಾರಿಗೆ ಸಚಿವರಾದ ಶ್ರೀ. ಲಕ್ಷ್ಮಣ ಸವದಿ ರವರು ಈ.ಕ.ರ.ಸಾ ಸಂಸ್ಥೆಯ ಪ್ರಗತಿ ಪರಿಶಿಲನೆ ಕೈಗೊಂಡರು. ಸದರಿ ಸಭೆಯಲ್ಲಿ      ಶ್ರೀ. ದತ್ತಾತ್ರೇಯ ರೇವೂರ್, ಕೆಕೆಆರ್ಡಿಬಿ ಅಧ್ಯಕ್ಷರು ಮತ್ತು ಬಿ.ಜಿ. ಪಾಟೀಲ್, ಎಂಎಲ್ಸಿ ರವರು ಉಪಸ್ಥಿತರಿದ್ದರು. ಅಲ್ಲದೇ ಇತ್ತೀಚೆಗೆ ಪ್ರಾರಂಭಿಸಿದ "ಮೊಬೈಲ್ ಲೈಬ್ರರಿ" ಪರಿಶೀಲಿಸಿ  ಸಂತೋಷವನ್ನು ವ್ಯಕ್ತಪಡಿಸಿದರು.
 

 

ದಿ.11.02.2021 ರಂದು ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಪಿ.ಸಿ.ಆರ್.ಎ ಹಾಗೂ ಆಯ್.ಓ.ಸಿ ವತಿಯಿಂದ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮಕ್ಕೆ ಪಿ.ಸಿ.ಆರ್.ಎ. ದಿಂದ ಶ್ರೀ ಸೆಲ್ವಕುಮಾರ ಹಾಗೂ ಆಯ್.ಓ.ಸಿ. ಯಿಂದ ಶ್ರೀ ಆನಂದ್ ರಾವರವರು ಉಪನ್ಯಾಸ ನೀಡಿದರು.

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1 ರಲ್ಲಿ “ಪತಂಜಲಿ ಯೋಗ ಸಮಿತಿ ಕಲಬುರಗಿ’ ರವರ ವತಿಯಿಂದ ದಿ.10.02.201 ರಿಂದ 16.02.2021 ರವರೆಗೆ ಉಚಿತ ಯೋಗ ಶಿಬಿರವನ್ನು ಅಯೋಜಿಸಲಾಗಿದೆ.

 

 

 

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ದಿ.27.01.2021 ರಂದು “ರಸ್ತೆ ಸುರಕ್ಷತೆ ಮಾಸಾಚರಣೆ” ಯ ಭಾಗವಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ರಾe ಕುಮಾರ ಪಾಟೀಲ್ ತೆಲ್ಕೂರ್, ಸನ್ಮಾನ್ಯ ಶಾಸಕರು, ಸೇಡಂ ಮತ ಕ್ಷೇತ್ರರವರ ಅಧ್ಯಕ್ಷತೆಯಲ್ಲಿ ಸಂಚಾರಿ ಗ್ರಂಥಾಲಯ ವಾಹನದ ಉದ್ಘಾಟನೆ, ಬೀದರ ಜಿಲ್ಲಾಡಳಿತದಿಂದ ಕೊಡುಗೆ ನೀಡಿದ ಸಂಚಾರಿ ಸಭಾ ವಾಹನದ ಉದ್ಘಾಟನೆ, ಪಿ.ಸಿ.ಆರ್.ಎ. ಸಂಸ್ಥೆಯ ವತಿಯಿಂದ ಇಂಧನ ಉಳಿತಾಯ ಪುರಸ್ಕಾರ ಪ್ರಧಾನ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿ 2019-20 ನೇ ಸಾಲಿನಲ್ಲಿ ನಿವೃತ್ತರಾದ 29 ಚಾಲಕರಿಗೆ ಸನ್ಮಾನ ಹಾಗೂ ಸೇವಾಸಿಂಧು ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬಸ್ ಪಾಸ್ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

 

 

  

ಸಂಸ್ಥೆಯ ಯಾದಗಿರಿ ವಿಭಾಗದ ಗುರುಮಿಠಕಲ್ ಹಾಗೂ ಶಹಾಪುರ ಘಟಕ, ಕಲಬುರಗಿ ವಿಭಾಗ-1 ರ ಕಲಬುರಗಿ-4 ನೆ ಘಟಕಗಳಿಗೆ ಇಂಧನ ಉಳಿತಾಯದಲ್ಲಿ PCRA ನಿಂದ “Best Depots Awards at State Level on Fuel Conservation ಸಕ್ಷಮ (SAKSHAM)-2021 ರಾಜ್ಯ ಮಟ್ಟದ ಪ್ರಶಸ್ತಿ ದೊರೆತ ಕ್ಷಣಗಳು.

 

 

ಈ.ಕ.ರ.ಸಾ.ಸಂಸ್ಥೆಯ ಚಾಲಕರ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾರ್ಜ್‍ಮನ್‍ಗಳಿಗಾಗಿ(ಎರಡನೇ ತಂಡ) ಹಾಗೂ ಲೆಕ್ಕಪತ್ರ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

     

 

ಈ.ಕ.ರ.ಸಾ ಸಂಸ್ಥೆಯು ಸಂಚಾರ ಮೇಲ್ವಿಚಾರಕರ ಎರಡನೇ ತಂಡದ ಹಾಗೂ ಸಹಾಯಕ ಸಂಚಾರ ನಿರೀಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾದೇಶಿಕ

ತರಬೇತಿ ಕೇಂದ್ರ, ಹುಮನಾಬಾದನಲ್ಲಿ ಆಯೋಜಿಸಿ ತರಬೇತಿ ನೀಡಲಾಯಿತು.

     

 

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ.ಕೂರ್ಮಾ ರಾವ್ ಎಮ್, ಭಾ.ಆ.ಸೇ,ರವರು ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ ಚಾಲಕರ ತರಬೇತಿ ಕಾರ್ಯಕ್ರಮದಲ್ಲಿ ಚಾಲಕರನ್ನು ಉದ್ದೇಶಿಸಿ ಉತ್ತಮ ಚಾಲನಾ ನಡವಳಿಕೆ,ವಾಹನ ನಿರ್ವಹಣೆ,ಸುರಕ್ಷಿತ ಚಾಲನೆ ಕುರಿತು ಮಾತನಾಡಿದರು ಹಾಗೂ ಅತಿಯಾದ ಆತ್ಮವಿಶ್ವಾಸ ಯಾವಾಗಲೂ ಹಡಗನ್ನು ಮುಳುಗಿಸುತ್ತದೆ ಎಂದು ತಿಳಿಸಿದರು

  

 

ಈ.ಕ.ರ.ಸಾ. ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ಘಟಕಗಳಲ್ಲಿ ಹೆಚ್ಚಿನ ಕೆ.ಎಮ್.ಪಿ.ಎಲ್ ಹಾಗೂ ಉತ್ತಮ ಆದಾಯ ತಂದ ಸಿಬ್ಬಂದಿಗಳಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

 

ಈ.ಕ.ರ.ಸಾ. ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ಘಟಕಗಳಲ್ಲಿ ಹೆಚ್ಚಿನ ಕೆ.ಎಮ್.ಪಿ.ಎಲ್ ಹಾಗೂ ಉತ್ತಮ ಆದಾಯ ತಂದ ಸಿಬ್ಬಂದಿಗಳಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

  

 

ಈ.ಕ.ರ.ಸಾ ಸಂಸ್ಥೆಯ ಚಾಲಕರ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾರ್ಜ್ ಮನ್ ಗಳಿಗಾಗಿ ದಿ.08.10.2020 ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

  

 

ಈ.ಕ.ರ.ಸಾ. ಸಂಸ್ಥೆಯಲ್ಲಿ ದಿ.06.10.2020 ರಂದು ಹೆಚ್ಚಿನ ಕೆ.ಎಮ್.ಪಿ.ಎಲ್ ಹಾಗೂ ಉತ್ತಮ ಆದಾಯ (ಇ.ಪಿ.ಕೆ.ಎಮ್) ತಂದು ಸಾಧನೆಗೈದ ಈ ಕೆಳಕಂಡ ಸಿಬ್ಬಂದಿಗಳಿಗೆ ಅಭಿನಂದನೆಗಳು ಸಲ್ಲಿಸಲಾಯಿತು.
1. ಕಲಬುರಗಿ-1 ವಿಭಾಗ ಸೇಡಂ ಘಟಕದಲ್ಲಿ ಶ್ರೀ.ಲಕ್ಷ್ಮಿಕಾಂತ್(14997)   - ಅತಿ ಹೆಚ್ಚು ಆದಾಯ 38.75 ಪ್ರತಿ ಕಿ.ಮೀ.
2. ಬೀದರ್ ವಿಭಾಗ ಭಾಲ್ಕಿ ಘಟಕದಲ್ಲಿ ಶ್ರೀ.ಸುಧಾಕರ                         - ಅತಿ ಹೆಚ್ಚು ಕೆ.ಎಮ್.ಪಿ.ಎಲ್ 5.79.
3. ರಾಯಚೂರು ವಿಭಾಗ ಸಿಂಧನೂರು ಘಟಕದಲ್ಲಿ ಶ್ರೀ.ಉಮಾಪತಿ          - ಅತಿ ಹೆಚ್ಚು ಕೆ.ಎಮ್.ಪಿ.ಎಲ್ 5.79.
4. ವಿಜಯಪುರ ವಿಭಾಗ ವಿಜಯಪುರ ಘಟಕ-3 ರಲ್ಲಿ ಶ್ರೀ.ಜಮಾದಾರ        - ಅತಿ ಹೆಚ್ಚು ಕೆ.ಎಮ್.ಪಿ.ಎಲ್ 7.75.

 

 

ಕಲಬುರಗಿ-1 ವಿಭಾಗ ಸೇಡಂ ಘಟಕದಲ್ಲಿ ಆದಾಯ (ಇ.ಪಿ.ಕೆ.ಎಮ್) ತಂದು ಸಾಧನೆಗೈದ ನಿರ್ವಾಹಕರಿಗೆ ಹಾಗೂ ರಾಯಚೂರು ವಿಭಾಗ ರಾಯಚೂರು ಘಟಕ-3 ರಲ್ಲಿ ಹೆಚ್ಚಿನ ಕೆ.ಎಮ್.ಪಿ.ಎಲ್ ತಂದು ಸಾಧನೆಗೈದ ಚಾಲಕರಿಗೆ ಅಭಿನಂದನೆ ಸಲ್ಲಿಸಲಾಯಿತು.

 

 

ಈ.ಕ.ರ.ಸಾ. ಸಂಸ್ಥೆಯ ಬೀದರ ವಿಭಾಗದ ಹುಮನಾಬಾದ ಘಟಕದಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಹೆಚ್ಚಿನ ಕೆ.ಎಮ್.ಪಿ.ಎಲ್ ಹಾಗೂ ಉತ್ತಮ ಆದಾಯ (ಇ.ಪಿ.ಕೆ.ಎಮ್) ತಂದು ಸಾಧನೆಗೈದ ಸಿಬ್ಬಂದಿಗಳಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

 

 

ಈ.ಕ.ರ.ಸಾ. ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ಘಟಕಗಳಲ್ಲಿ ಉತ್ತಮ ಆದಾಯ (ಇ.ಪಿ.ಕೆ.ಎಮ್) ತಂದು ಸಾಧನೆಗೈದ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು

 

 

ಈ.ಕ.ರ.ಸಾ. ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ಘಟಕಗಳಲ್ಲಿ ಹೆಚ್ಚಿನ ಕೆ.ಎಮ್.ಪಿ.ಎಲ್ ತಂದು ಸಾಧನೆಗೈದ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮಗಳು.

 

 

ದಿ.02.10.2020 ರ ಮಹಾತ್ಮಾ ಗಾಂಧಿಜಿಯವರ ಜಯಂತಿಯ ಅಂಗವಾಗಿ ದಿ.28.09.2020 ರಿಂದ ದಿ.03.10.2020 ರವರೆಗೆ ಈ.ಕ.ರ.ಸಾ. ಸಂಸ್ಥೆಯಲ್ಲಿ “ಸ್ವಚ್ಛತಾ ಸಪ್ತಾಹ” ಹಮ್ಮಿಕೊಳ್ಳಲಾಯಿತು ಹಾಗೂ ಸ್ವಚ್ಛತಾ ಸಪ್ತಾಹದ ಅಂಗವಾಗಿ ವಿವಿಧ ವಿಭಾಗಗಳಲ್ಲಿ, ಘಟಕಗಳಲ್ಲಿ, ಬಸ್ ನಿಲ್ದಾಣ ಹಾಗೂ ಇತರ ಕಛೇರಿ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

 

 

ದಿನಾಂಕ 30.09.2020 ರಂದು ಈ.ಕ.ರ.ಸಾ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಆಯೋಜಿಸಿದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರ ಆಯ್ಕೆ, ಸ್ಪೂರ್ತಿ ಪ್ರೇರಣೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ” ದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ  ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ರವರು ಭಾಗವಹಿಸಿ ಮಕ್ಕಳಿಗೆ ಸದರಿ ವಿಷಯದ ಕುರಿತಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.

 

ದಿನಾಂಕ 30.09.2020 ರಂದು ಈ.ಕ.ರ.ಸಾ ಸಂಸ್ಥೆಯ ರಾಯಚೂರು ವಿಭಾಗದಲ್ಲಿ ಆಯೋಜಿಸಿದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರ ಆಯ್ಕೆ, ಸ್ಪೂರ್ತಿ ಪ್ರೇರಣೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ” ದಲ್ಲಿ ರಾಯಚೂರು ಜಿಲ್ಲೆಯ ಇತರ ಅಧಿಕಾರಿಗಳು, ಕೇಂದ್ರ ಕಛೇರಿಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳು ಹಾಗೂ ವಿಭಾಗದ ಅಧಿಕಾರಿಗಳು ಭಾಗವಹಿಸಿ ಮಕ್ಕಳಿಗೆ ಸದರಿ ವಿಷಯದ ಕುರಿತಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.   

 

ಈ.ಈ.ಕ.ರಾ.ಸಾ. ಸಂಸ್ಥೆ, ಯಾದಗಿರಿ ವಿಭಾಗದಿಂದ ದಿ 29.9.2020 ರಂದು ಸಂಸ್ಥೆಯ ಸಿಬ್ಬಂದಿ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರದ ಆಯ್ಕೆ, ಸ್ಪೂರ್ತಿ, ಪ್ರೇರಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಹಮ್ಮಿಕೊಳ್ಳಲಾದ ಒಂದು ದಿನದ ಕಾರ್ಯಾಗಾರದಲ್ಲಿ ಕು. ಅಶ್ವಿಜಾ ಭಾ.ಆ.ಸೇ, ಶ್ರೀ ವಿಷ್ಣುವರ್ಧನ ರೆಡ್ಡಿ, ಕ.ಆ.ಸೇ, ಕು. ಸ್ಟೆಲ್ಲಾ ಕೈ.ಆ.ಸೇ ಹಾಗೂ ಶ್ರೀ ಧನರಾಜ್ ಚಿತ್ತಾಪೂರ ರವರು ಆಗಮಿಸಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಎಂ.ಪಿ ಶ್ರೀಹರಿಬಾಬು ವಿ.ನಿ ಮತ್ತು  ವಿಭಾಗದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

 

 

ದಿನಾಂಕ 29.09.2020 ರಂದು ಈ.ಕ.ರ.ಸಾ ಸಂಸ್ಥೆಯ ಕಲಬುರಗಿ-1 ಮತ್ತು ಕಲಬುರಗಿ-2 ವಿಭಾಗಗಳು ಸೇರಿ ಆಯೋಜಿಸಿದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರ ಆಯ್ಕೆ, ಸ್ಪೂರ್ತಿ ಪ್ರೇರಣೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ” ದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ  ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ರವರು ಭಾಗವಹಿಸಿ ಮಕ್ಕಳಿಗೆ ಸದರಿ ವಿಷಯದ ಕುರಿತಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು. ಸದರಿ ಕಾರ್ಯಗಾರದಲ್ಲಿ ಕಲಬುರಗಿ ಜಿಲ್ಲೆಯ ಇತರ ಅಧಿಕಾರಿಗಳು ಹಾಗೂ ವಿಭಾಗದ ಅಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

 

ದಿನಾಂಕ 25.09.2020 ರಂದು ಈ.ಕ.ರ.ಸಾ ಸಂಸ್ಥೆಯ ಕೊಪ್ಪಳ ವಿಭಾಗದಲ್ಲಿ ಆಯೋಜಿಸಿದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರ ಆಯ್ಕೆ, ಸ್ಪೂರ್ತಿ ಪ್ರೇರಣೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ” ದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ  ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ರವರು ಭಾಗವಹಿಸಿ ಮಕ್ಕಳಿಗೆ ಸದರಿ ವಿಷಯದ ಕುರಿತಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು. ಸದರಿ ಕಾರ್ಯಗಾರದಲ್ಲಿ ಕೊಪ್ಪಳ ಜಿಲ್ಲೆಯ ಇತರ ಅಧಿಕಾರಿಗಳು ಹಾಗೂ ಕೇಂದ್ರ ಕಛೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ತಾಂತ್ರಿಕ ಶಿಲ್ಪಿ ಹಾಗೂ ವಿಭಾಗದ ಅಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

 

ದಿನಾಂಕ 23.09.2020 ರಂದು ಈ.ಕ.ರ.ಸಾ.ಸಂಸ್ಥೆಯ ಚಾಲಕರ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಗೆ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ಭೇಟಿ ನೀಡಿ ಪರಿಶೀಲನೆ ಮಾಡಿದರು ಹಾಗೂ ಕೇಂದ್ರದಲ್ಲಿರುವ ತರಬೇತಿ ಪರಿಕರಗಳ ನಮೂನೆಗಳನ್ನು ವಿಕ್ಷೀಸಿ ಕೇಂದ್ರದ ಉನ್ನತಿಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಂಶುಪಾಲರಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ಕೇಂದ್ರದ ಆವರಣದಲ್ಲಿ ಶ್ರೀಗಂಧದ ಸಸಿಯನ್ನು ನೆಟ್ಟರು.

 

ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ದಿ.23.09.2020 ರಂದು ಈ.ಕ.ರ.ಸಾ ಸಂಸ್ಥೆಯ ವತಿಯಿಂದ ಹೊಸಪೇಟೆ ವಿಭಾಗದಲ್ಲಿ ಆಯೋಜಿಸಿದ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರ ಆಯ್ಕೆ, ಸ್ಪೂರ್ತಿ ಪ್ರೇರಣೆ, ಮತ್ತು ಉಜ್ವಲ ಭವಿಷ್ಯಕ್ಕಾಗಿ ಒಂದು ದಿನದ ಕಾರ್ಯಾಗಾರ” ದಲ್ಲಿ ಭಾಗವಹಿಸಿ ಮಕ್ಕಳಿಗೆ ಸದರಿ ವಿಷಯದ ಕುರಿತಂತೆ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು.

 

ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಈ.ಕ.ರ.ಸಾ.ಸಂಸ್ಥೆ, ದಿನಾಂಕ 22.09.2020 ರಂದು ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ ಕೇಂದ್ರದಲ್ಲಿ ಘಟಕ ವ್ಯವಸ್ಥಾಪಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದರಿಯವರು ನಿರ್ವಹಿಸಬೇಕಾದ ಕರ್ತವ್ಯಗಳು, ಘಟಕದ ಕಾರ್ಯ ನಿರ್ವಹಣೆಯಲ್ಲಿ ಅವರ ಪಾತ್ರ ಹಾಗೂ ಮಹತ್ವದ ಕುರಿತು ಮನವರಿಕೆ ಮಾಡಿದರು. ಮುಂದುವರೆದು Central Institute of Road Transport (CIRT) Pune ರವರ ಸಹಯೋಗದೊಂದಿಗೆ ಆಯೋಜಿಸಿದ ಘಟಕ ವ್ಯವಸ್ಥಾಪಕರವರ ಕಾರ್ಯ ನಿರ್ವಹಣೆ ಕುರಿತ ವೆಬಿನಾರ್ (ವಿಡಿಯೋ ಸಂವಾದ) ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ಸದರಿ ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

 

ಶ್ರೀ. ಕೂರ್ಮಾ ರಾವ್ ಎಮ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಈ.ಕ.ರ.ಸಾ.ಸಂಸ್ಥೆ, ದಿನಾಂಕ 22.09.2020 ರಂದು ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದಗೆ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು ಹಾಗೂ ಕೇಂದ್ರದ ಉನ್ನತಿಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.

 

ಕಲಬುರಗಿ-2 ವಿಭಾಗ 2019-20 ನೇ ಸಾಲಿನಲ್ಲಿ ವಿಭಾಗದಲ್ಲಿ ಉತ್ತಮ ಕೆ.ಎಮ್.ಪಿ.ಎಲ್‌ ಸಾಧನೆಗಾಗಿ ಶ್ರಮಿಸಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ 

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಶಸ್ತಿಗಳು ಹಾಗೂ ವಿವಿಧ ಚಟುವಟಿಕೆಗಳು

ಈ.ಕ.ರ.ಸಾ ಸಂಸ್ಥೆಗೆ " ಕೆ.ಎಂ.ಪಿ.ಎಲ್‌ ಸುಧಾರಣಾ ಸ್ಪರ್ಧೆ- 2019" ರಲ್ಲಿ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನ ಹಾಗೂ ರೂ. 5 ಲಕ್ಷ ನಗದು ಬಹುಮಾನ

 ASRTU ಪ್ರಶಸ್ತಿ 2016-17 

 

 ಕೆ.ಎಂ.ಪಿ.ಎಲ್. ಸುಧಾರಣಾ ಫ್ರಶಸ್ತಿ- 2016-17

 Urban Excellence ಪ್ರಶಸ್ತಿ -2014

 

2014ನೇ ಸಾಲಿನ ಇಂಧನ ಮಿತವ್ಯಯ ಸಾಧನೆ- ನಗರ ಸಾರಿಗೆ

ಕಾರ್ಯಾಚರಣೆಯಲ್ಲಿ ದ್ವಿತೀಯ ಬಹುಮಾನ 

 

ಇತ್ತೀಚಿನ ನವೀಕರಣ​ : 29-03-2023 03:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080