ಅಭಿಪ್ರಾಯ / ಸಲಹೆಗಳು

ಪ್ರಶಸ್ತಿಗಳು

 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ದೊರೆತ ಪ್ರಶಸ್ತಿಗಳು

ಪಿ.ಸಿ.ಆರ್.‌ಎ ಸಂಸ್ಥೆಯ "ಸಕ್ಷಮ್‌-2020" ಕಾರ್ಯಕ್ರಮದ ಅಡಿಯಲ್ಲಿ ಈ.ಕ.ರ.ಸಾ.ಸಂಸ್ಥೆಗೆ ಅತಿ ಹೆಚ್ಚು ಇಂಧನ ಉಳಿತಾಯಕ್ಕೆ  ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಹಾಗೂ ರಾಜ್ಯಮಟ್ಟದಲ್ಲಿ ಮೂರು ಘಟಕಗಳಿಗೆ ಪ್ರಶಸ್ತಿ ಲಭಿಸಿದೆ.

 

 

ಇಂಡಿಯಾ ಬಸ್‌ ಸುರಕ್ಷತಾ ಪ್ರಶಸ್ತಿ – 2018  

 

ಸಾರ್ವಜನಿಕ ಸಾರಿಗೆಯಲ್ಲಿ ಶ್ರೇಷ್ಠ ಸುರಕ್ಷತಾ ಕ್ರಮಗಳನ್ನು ಅಳವಡಿಕೆಗೆ ಅಪೊಲೊ ವತಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಇಂಡಿಯಾ ಬಸ್‌  ಸುರಕ್ಷತಾ ಪ್ರಶಸ್ತಿ – 2018 ದೊರೆತಿದೆ.

ಸ್ಕಾಚ್‌ ಆರ್ಡರ್‌ ಆಫ್‌ ಮೆರಿಟ್‌ (SKOTCH Order-of-Merit) -2017

 

2017-18 ನೇ ಸಾಲಿನಲ್ಲಿ ಉತ್ತಮ ಕೈಗಾರಿಕಾ ಬಾಂಧವ್ಯ ಮತ್ತು ಕಾರ್ಮಿಕರಿಗೆ ಕಾಲಕಾಲಕ್ಕೆ ನೀಡಬೇಕಾದ ಸೌಲಭ್ಯಗಳನ್ನು (ಮೂಲಭೂತ ಸೌಲಭ್ಯಗಳನ್ನೊಳಗೊಂತೆ) ಒದಗಿಸಿದಕ್ಕಾಗಿ SKOCH  ಪ್ರಶಸ್ತಿ ದೊರೆತಿದೆ.

ASRTU ಪ್ರಶಸ್ತಿ - 2016-17 

 

2016-17ನೇ ಸಾಲಿನಲ್ಲಿ ಸಚಿವಾಲಯದ ರಿಯಾಯಿತಿ ಕೊಡುಗೆಯಲ್ಲಿ ಗರಿಷ್ಠ ಸುಧಾರಣೆಗಾಗಿ (Maximum improvement in contribution towards secretarial Rebates)   ASRTU  ಪ್ರಶಸ್ತಿ ದೊರೆತಿದೆ .

ಕೆ.ಎಂ.ಪಿ.ಎಲ್. ಸುಧಾರಣಾ ಫ್ರಶಸ್ತಿ- 2015-16

 

2015-16 ನೇ ಸಾಲಿನಲ್ಲಿ ಗ್ರಾಮೀಣ ಸಾರಿಗೆಯಲ್ಲಿ ಕೆ.ಎಮ್.ಪಿ.ಎಲ್‌ ನ ಗರಿಷ್ಠ ಸುಧಾರಣೆಗಾಗಿ(ಅತಿ ಹೆಚ್ಚಿನ ಇಂಧನ ಉಳಿತಾಯಕ್ಕೆ) ASRTU ಪ್ರಶಸ್ತಿ ದೊರೆತಿದೆ.

ಇಂಡಿಯಾ ಬಸ್‌ ಪ್ರಶಸ್ತಿ - 2015-16   

 

2015-16 ನೇ ಸಾಲಿನಲ್ಲಿ ಸಂಸ್ಥೆಯ ವಿನೂತನ ನಗರ ಸಾರಿಗೆ ಬಸ್‌ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದಕ್ಕೆ  “India Bus Award” ದೊರೆತಿದೆ.

2014ನೇ ಸಾಲಿನ ಇಂಧನ ಮಿತವ್ಯಯ ಸಾಧನೆ- ನಗರ ಸಾರಿಗೆ ಕಾರ್ಯಾಚರಣೆಯಲ್ಲಿ ದ್ವಿತೀಯ ಬಹುಮಾನ

 

ಭಾರತ ಸರಕಾರದ ಇಂಧನ ಸಚಿವಾಲಯದ ಅಡಿಯಲ್ಲಿ ನಡೆದ ರಾಷ್ಟೀಯ ಇಂಧನ ಉಳಿತಾಯ ದಿನಾಚರಣೆ ಅಂಗವಾಗಿ ನಗರ ಸಾರಿಗೆ  ಕಾರ್ಯಾಚರಣೆಯಲ್ಲಿ ಇಂಧನ ಮಿತವ್ಯಯ ಸಾಧಿಸಿದ ...ಸಾ.ಸಂಸ್ಥೆಗೆ 2ನೇಬಹುಮಾನ ದೊರೆತಿದೆ.

ಅರ್ಬನ್‌ ಎಕ್ಸೆಲೆನ್ಸ್‌ ಪ್ರಶಸ್ತಿ (Urban Excellence) -2014

 

ದಿನಾಂಕ 28.11.2014 ರಂದು ದೆಹಲಿಯಲ್ಲಿ ಭಾರತ ಸರ್ಕಾರದ ನಗರಾಭಿವೃದ್ದಿ ಮಂತ್ರಾಲಯದ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವಿಶೇಷ ವಿನೂತನ ಮಾದರಿಯ ನಗರ ಸಾರಿಗೆ ಸೇವೆಯ ಆವಿಷ್ಕಾರಕ್ಕಗಾಗಿ “ಬೆಸ್ಟ ಸಿಟಿ ಬಸ್ ಸರ್ವಿಸ್” (Best City Services) ವರ್ಗದಡಿಯಲ್ಲಿ Innovation City Bus Operations ಗೆ "Urban Excellence Award-2014" ಟ್ರೋಫಿಯನ್ನು ನೀಡಿದ್ದಾರೆ.

Appreciation for Corporate Website-2013

 

ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜಾಲತಾಣಕ್ಕೆ “Appreciation for Corporate Website ದೊರೆತಿದೆ

ಸಿಲ್ವರ್‌  ಪ್ರಶಸ್ತಿ (Silver Award for In-House Magazine Languages)– 2013

 

ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ 2013 ರ ಸಾಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ “ಈಶಾನ್ಯ ವಾಹಿನಿ” ಪತ್ರಿಕೆಗೆ  “Silver Award for In-House Magazine Languagesದೊರೆತಿದೆ.

ಅಪೋಲೋ ಸಿವಿ. ಅವಾರ್ಡ 2012 

 

ದಿ.30-04-2012 ರಂದು ಮುಂಬೈಯಲ್ಲಿ ಜರುಗಿದ “ಅಪೋಲೋ ಸಿವಿ. ಅವಾರ್ಡ 2012” ರ ಸಮಾರಂಭದಲಿ "Best Pulbic Sector Fleet Operator 2012” ರ  ವಿಭಾಗದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಗುಲಬರ್ಗಾವು ಪ್ರಥಮ ಬಹುಮಾನ ಪಡೆದಿರುತ್ತದೆ.

ASRTU ರಸ್ತೆ ಸುರಕ್ಷತಾ ಪ್ರಶಸ್ತಿ- 2011-12

 

ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ದೆಹಲಿ ರವರು ಈಶಾನ್ಯ ಸಾರಿಗೆ ಸಂಸ್ಥೆಯ ಅತ್ಯತ್ತಮ ಸಾಧನೆ ಮತ್ತು 2011-2012 ರ ಅವಧಿಯಲ್ಲಿ ಗ್ರಾಮೀಣ ಸಾರಿಗೆ ವಿಭಾಗದಲ್ಲಿ ಅತೀ ಕನಿಷ್ಟ ಅಪಘಾತ ಪ್ರಮಾಣಕ್ಕಾಗಿ ಬಹುಮಾನವನ್ನು ನೀಡಿದೆ

2006-07 ನೇ ಸಾಲಿನಲ್ಲಿ ದೇಶದಲ್ಲಿಯೆ ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ ಕೆ.ಎಂ.ಪಿ.ಎಲ್ಪ್ರಗತಿ ಸಾಧನೆ ಫ್ರಶಸ್ತಿ

 

ದೇಶದಲ್ಲಿಯೆ ಇತರೆ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗಿಂತ, ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ  ಕೆ.ಎಂ.ಪಿ.ಎಲ್. ಪ್ರಗತಿ ಸಾಧಿಸಿರುವುದರಿಂದ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU)   ದೆಹಲಿ ವತಿಯಿಂದ ಬಹುಮಾನವನ್ನು ಪಡೆದಿದೆ.

2005-06 ನೇ ಸಾಲಿನಲ್ಲಿ ಗರಿಷ್ಠ ಕೆ.ಎಂ.ಪಿ.ಎಲ್. ಸಾಧನೆ ಫ್ರಶಸ್ತಿ

 

ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ದೆಹಲಿ ರವರು ಈಶಾನ್ಯ ಸಾರಿಗೆ ಸಂಸ್ಥೆಯು 2005-06 ನೇ ಸಾಲಿನಲ್ಲಿ ದೇಶದಲ್ಲಿಯೆ ಇತರೆ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗಿಂತ ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ ಕೆ.ಎಂ.ಪಿ.ಎಲ್. ಪ್ರಗತಿ  ಸಾಧಿಸಿರುವುದರಿಂದ ಬಹುಮಾನವನ್ನು ನೀಡಿದೆ.

2005-06 ನೇ ಸಾಲಿನಲ್ಲಿ ಗರಿಷ್ಠ ಕೆ.ಎಂ.ಪಿ.ಎಲ್. ಸಾಧನೆ ಫ್ರಶಸ್ತಿ

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿ ಲೀಟರ್ ಡಿಸೈಲಗೆ 5.44 ಕಿ. ಮೀ. ಸಾಧನೆಯನ್ನು ಮಾಡಿದ್ದು, ಪಿ.ಸಿ.ಆರ್.ಎ. ವತಿಯಿಂದ ಪ್ರಥಮ ಬಹುಮಾನವನ್ನು ಪಡೆದಿದೆ.

2004-05 ನೇ ಸಾಲಿನಲ್ಲಿ ಅತೀ ಗರಿಷ್ಠ ಕೆ.ಎಂ.ಪಿ.ಎಲ್. ಸಾಧನೆ ಫ್ರಶಸ್ತಿ

 

ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ದೆಹಲಿ ರವರು ಈಶಾನ್ಯ ಸಾರಿಗೆ ಸಂಸ್ಥೆಯು 2004-05 ನೇ ಸಾಲಿನಲ್ಲಿ ದೇಶದಲ್ಲಿಯೆ ಇತರೆ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗಿಂತ ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ ಕೆ.ಎಂ.ಪಿ.ಎಲ್. ಪ್ರಗತಿ  ಸಾಧಿಸಿರುವುದರಿಂದ ಬಹುಮಾನವನ್ನು ನೀಡಿದೆ.

2004-05 ನೇ ಸಾಲಿನಲ್ಲಿ ಅತೀ ಗರಿಷ್ಠ ಕೆ.ಎಂ.ಪಿ.ಎಲ್. ಸಾಧನೆ ಫ್ರಶಸ್ತಿ

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರತಿ ಲೀಟರ್ ಡಿಸೈಲಗೆ 5.44 ಕಿ. ಮೀ. ಸಾಧನೆಯನ್ನು ಮಾಡಿದ್ದು, ಪಿ.ಸಿ.ಆರ್.ಎ ವತಿಯಿಂದ ಪ್ರಥಮ ಬಹುಮಾನವನ್ನು ಪಡೆದಿದೆ.

2003-04 ನೇ ಸಾಲಿನಲ್ಲಿ ದೇಶದಲ್ಲಿಯೆ ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ ಕೆ.ಎಂ.ಪಿ.ಎಲ್. ಪ್ರಗತಿ ಸಾಧನೆ ಫ್ರಶಸ್ತಿ

 

ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ದೆಹಲಿ ರವರು ಈಶಾನ್ಯ ಸಾರಿಗೆ ಸಂಸ್ಥೆಯು 2003-04 ನೇ ಸಾಲಿನಲ್ಲಿ ದೇಶದಲ್ಲಿಯೆ ಇತರೆ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗಿಂತ ಗ್ರಾಮೀಣ ಸಾರಿಗೆಯಲ್ಲಿ ಅತೀ ಹೆಚ್ಚಿನ ಕೆ.ಎಂ.ಪಿ.ಎಲ್. ಪ್ರಗತಿ 5.38 ಸಾಧಿಸಿರುವುದರಿಂದ ಬಹುಮಾನವನ್ನು ನೀಡಿದೆ.

2003-04 ನೇ ಸಾಲಿನಲ್ಲಿ ಅತೀ ಗರಿಷ್ಠ ಕೆ.ಎಂ.ಪಿ.ಎಲ್. ಸಾಧನೆ ಫ್ರಶಸ್ತಿ

 

ಪೆಟ್ರೋಲಿಯಂ ಉಳಿತಾಯ ಮತ್ತು ಸಂಶೋಧನಾ ಸಂಸ್ಥೆಯು (PCRA) 2003-04 ನೇ ಸಾಲಿನಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯು 5.38 ಕೆ.ಎಂ.ಪಿ.ಎಲ್. ಸಾಧಿಸಿ, ಎಲ್ಲಾ ಸಾರಿಗೆ ಸಂಸ್ಥೆಗಳಿಗಿಂತಲೂ ಅತೀ ಗರಿಷ್ಠ ಸಾಧನೆಯನ್ನು ತೋರಿಸಿದ್ದರಿಂದ ಬಹುಮಾನವನ್ನು ನೀಡಿದೆ.

ಸಂಚಾರ ಮಂತ್ರಿಗಳ ಟ್ರೋಫಿ ಹಾಗೂ ನಗದು ಬಹುಮಾನ ರೂ. 1.50 ಲಕ್ಷ

 

ಈಶಾನ್ಯ ಸಾರಿಗೆ ಸಂಸ್ಥೆಯ ಅತ್ಯತ್ತಮ ಸಾಧನೆ ಮತ್ತು 1999-2002 ರ ಅವಧಿಯಲ್ಲಿ ಗ್ರಾಮೀಣ ಸಾರಿಗೆ ವಿಭಾಗದಲ್ಲಿ ಅತೀ ಕನಿಷ್ಟ ಅಪಘಾತ ಪ್ರಮಾಣಕ್ಕಾಗಿ ಭಾರತ ಸರ್ಕಾರದ ರಸ್ತೆ ಸಂಚಾರ ಮತ್ತು ರಾಷ್ಟ್ರೀಯ ಹೆದ್ದಾರಿಯ ಮಂತ್ರಾಲಯವು, ಸಂಚಾರ ಮಂತ್ರಿಗಳ ಟ್ರೋಫಿ ಹಾಗೂ ನಗದು ರೂ. 1.50 ಲಕ್ಷವನ್ನು ಬಹುಮಾನವನ್ನಾಗಿ ನೀಡಿದೆ.

ಇತ್ತೀಚಿನ ನವೀಕರಣ​ : 14-07-2021 12:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080