ಅಭಿಪ್ರಾಯ / ಸಲಹೆಗಳು

ಅಂಗವಿಕಲ - ಅಂಧ - ಸ್ವಾತಂತ್ರ್ಯ ಹೋರಾಟಗಾರರ ಪಾಸ್

1. ಅಂಗವಿಕಲರ ರಿಯಾಯಿತಿ ಬಸ್ ಪಾಸ್

 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ಅಂಗವಿಕಲರಿಗೆ ತಮ್ಮ ದೈನಂದಿನ ಕೆಲಸಗಳಿಗಾಗಿ ಅನುಕೂಲವಾಗುವಂತೆ  ವಾಸಸ್ಥಳದಿಂದ 100 ಕಿಮೀ ಪರಿಮಿತಿಯೊಳಗೆ ಸಂಸ್ಥೆಯ ನಗರ/ಉಪನಗರ/ ಸಾಮಾನ್ಯ/ವೇಗದೂತ ಸಾರಿಗೆಗಳಲ್ಲಿ ಪ್ರಯಾಣಿಸಲು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ರಿಯಾಯಿತಿ ಬಸ್ ಪಾಸ್‍ಗಳನ್ನು ವಿತರಿಸಲಾಗುತ್ತಿದೆ. 

 

>  ಕರ್ನಾಟಕ ರಾಜ್ಯದ ವಾಸಿಗಳು / ಫಲಾನುಭವಿಗಳು ಮಾತ್ರ ವಿಕಲಚೇತನರ ರಿಯಾಯಿತಿ ಬಸ್ ಪಾಸ್‍ಗಳನ್ನು ಪಡೆಯಲು ಅರ್ಹರಿರುತ್ತಾರೆ.

> ಪ್ರಸ್ತುತ ವಿಕಲಚೇತನರ ಬಸ್ ಪಾಸ್ ದರ ರೂ. 660/- ಇರುತ್ತದೆ.

> ಅಂಗವಿಕಲರ ವ್ಯಕ್ತಿಗಳ ಅಧಿನಿಯಮದ ಅನುಸಾರ, ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಹೊಂದಿರುವವರಿಗೆ ಮಾತ್ರ ವಿಕಲಚೇತನರ ರಿಯಾಯಿತಿ ಪಾಸಿನ ಸೌಲಭ್ಯ ವಿತರಿಸಲಾಗುವುದು.

> ಸದರಿ ಬಸ್ ಪಾಸ್‍ದಾರರಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.

 

ಪ್ರಯಾಣಿಸುವ ಸೌಲಭ್ಯ ಮತ್ತು ಪಾಸ್ ಅವಧಿ :

> ಸದರಿ ಬಸ್ ಪಾಸ್‍ದಾರರಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಮಾತ್ರ ತಮ್ಮ ಸ್ವಂತ ಸ್ಥಳದಿಂದ 100 ಕಿ.ಮೀ.ವರೆಗೆ ಉಚಿತ ಪ್ರಯಾಣಿಸಲು ಅವಕಾಶವಿರುತ್ತದೆ.

> ಸದರಿ ಬಸ್ ಪಾಸ್ ಅವಧಿಯು ಜನೆವರಿಯಿಂದ ಡಿಸೆಂಬರ್ ವರೆಗೆ ಮಾನ್ಯತೆ ಇರುತ್ತದೆ.

> ಅಂಗವಿಕಲರ್ ಬಸ್ ಪಾಸ್‍ಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅನುಮತಿಸಲಾಗುವುದು.

 

ಪಾಸ್ ವಿತರಿಸಲು ಅನುಸರಿಸುವ ವಿಧಾನಗಳು:

> ಅಂಗವಿಕಲರು ಬಸ್ ಪಾಸ್ ಪಡೆಯಲು ಖುದ್ದಾಗಿ ಹಾಜರಾಗಿ ಅಂಗವಿಕಲ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಪರಿಶೀಲಿಸಲು ಸಂಬಂಧಪಟ್ಟ ವಿಭಾಗೀಯ ಕಛೇರಿಯಲ್ಲಿ ಸಲ್ಲಿಸುವುದು.

> ಅರ್ಜಿಯ ಜೊತೆಗೆ ವಿಕಲಚೇತನರು (ವಾಸಸ್ಥಳ ಜಿಲ್ಲಾವ್ಯಾಪ್ತಿಯ) ನಿಗದಿಪಡಿಸಿದ ವೈದ್ಯಕೀಯ ಪ್ರಾಧಿಕಾರಗಳಿಂದ ಗುರುತಿಸಲ್ಪಟ್ಟ ವಿಕಲಚೇತನರಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯ ಸಹಿ ಹಾಗೂ ಮೊಹರಿನೊಡನೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಒದಗಿಸಿರುವ ಅಂಗವಿಕಲತೆ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯ ಮೂಲಪ್ರತಿಯನ್ನು ಪರಿಶೀಲನೆಗಾಗಿ ಹಾಜರುಪಡಿಸಬೇಕಿರುತ್ತದೆ.

> ಅರ್ಜಿದಾರರು ಅಂಗವಿಕಲತೆ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯ ಪ್ರತಿಯನ್ನು ಹಾಗೂ ತಮ್ಮ ವಾಸಸ್ಥಳದ ಬಗ್ಗೆ ಇತ್ತೀಚಿನ ಆಧಾರ್ ಗುರುತಿನ ಚೀಟಿಯ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಆಧಾರ್ ಗುರುತಿನ ಚೀಟಿ ಲಭ್ಯವಿಲ್ಲದಿದ್ದಲ್ಲಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‍ಪೋರ್ಟ್ ಪ್ರತಿಯನ್ನು ಲಗತ್ತಿಸಬೇಕು.

> ಅರ್ಜಿಯೊಂದಿಗೆ ಎರಡು ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರಗಳನ್ನು ಸಲ್ಲಿಸಬೇಕು.

> ವಿಕಲಚೇತನ ಫಲಾನುಭವಿಗಳು ತಮ್ಮ ವಾಸಸ್ಥಳವಿರುವ ಜಿಲ್ಲಾ ವ್ಯಾಪ್ತಿಯ ಸಂಸ್ಥೆಯ ವಿಭಾಗೀಯ ಕಛೇರಿಗಳಲ್ಲಿ ಹೊಸ ಪಾಸ್ ಪಡೆಯಲು ಅರ್ಜಿ ಹಾಗೂ ನಿಗದಿತ ಶುಲ್ಕವನ್ನು ನಗದಾಗಿ ಅಥವಾ ಡಿ.ಡಿ ಮುಖಾಂತರ ಪಾವತಿಸಬೇಕು. ಡಿ.ಡಿ ಯನ್ನು ಸಂಬಂಧಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ, ಕ.ಕ.ರ.ಸಾ.ನಿಗಮ ರವರ ಹೆಸರಿನಲ್ಲಿ ಸಲ್ಲಿಸಬೇಕು.

> ಪ್ರತಿ ವರ್ಷ ಜನೆವರಿ ತಿಂಗಳಿನಿಂದ ಫೇಬ್ರವರಿ ತಿಂಗಳವರೆಗೆ ಸದರಿ ಬಸ್ ಪಾಸ್‍ಗಳನ್ನು ನವೀಕರಿಸಲಾಗುತ್ತಿದೆ.

 

ಇತರೆ ನಿಬಂಧನೆಗಳು:

> ಸರ್ಕಾರಿ ಉದ್ಯೋಗದಲ್ಲಿರುವ ವಿಕಲಚೇತನರು ಹಾಗೂ ಸಾರಿಗೆ ಭತ್ಯೆ ಪಡೆಯುತ್ತಿರುವ ವಿಕಲಚೇತನರು ರಿಯಾಯಿತಿ ಬಸ್ ಪಾಸ್ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.

> ಸದರಿ ಪಾಸುದಾರರು ಪ್ರಯಾಣಿಸುವ ವೇಳೆಯಲ್ಲಿ ಕಡ್ಡಾಯವಾಗಿ ಬಸ್ ಪಾಸ್‍ಗಳನ್ನು ಹೊಂದಿರಬೇಕು, ಬಸ್‍ನಲ್ಲಿ ಚಾಲಕ/ನಿರ್ವಾಹಕರು ಹಾಗೂ ವಾಹನದ ತಪಾಸಣಾ ಅಧಿಕಾರಿಗಳು ಪರಿಶೀಲನೆಗಾಗಿ ವಿಚಾರಿಸಿದಾಗ ಸದರಿ ಬಸ್ ಪಾಸ್‍ನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.

 

2. ಅಂಧರ ಬಸ್ ಪಾಸ್

 

ಅಂಧರಿಗೆ ತಮ್ಮ ದೈನಂದಿನ ಕೆಲಸಗಳಿಗಾಗಿ ಅನುಕೂಲವಾಗುವಂತೆ  ಯಾವುದೇ ಕಿ.ಮೀ. ಪರಿಮಿತಿ ಇಲ್ಲದೆ ಸಂಸ್ಥೆಯ ನಗರ/ಉಪನಗರ/ ಸಾಮಾನ್ಯ/ವೇಗದೂತ ಸಾರಿಗೆಗಳಲ್ಲಿ ಪ್ರಯಾಣಿಸಲು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಉಚಿತ ಬಸ್ ಪಾಸ್‍ಗಳನ್ನು ವಿತರಿಸಲಾಗುತ್ತಿದೆ.

 

> ಕರ್ನಾಟಕ ರಾಜ್ಯದ ವಾಸಿಗಳು / ಫಲಾನುಭವಿಗಳು ಮಾತ್ರ ಅಂಧರ ಉಚಿತ ಬಸ್ ಪಾಸ್‍ಗಳನ್ನು ಪಡೆಯಲು ಅರ್ಹರಿರುತ್ತಾರೆ.

> ಅಂಧರ ಬಸ್ ಪಾಸ್‍ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

> ಪೂರ್ಣ ಅಂಧತ್ವ ಹೊಂದಿರುವ (100%) ಫಲಾನುಭವಿಗಳು ಅರ್ಹರಿರುತ್ತಾರೆ.

> ಸದರಿ ಬಸ್ ಪಾಸ್‍ದಾರರಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಮಾತ್ರ ಉಚಿತ ಪ್ರಯಾಣಿಸಲು ಅವಕಾಶವಿರುತ್ತದೆ.

> ಸದರಿ ಬಸ್ ಪಾಸ್ ಹೊಂದಿರುವ ಫಲಾನುಭವಿಗಳು ಕರ್ನಾಟಕ ರಾಜ್ಯದೊಳಗೆ ಎಲ್ಲೆಂದರಲ್ಲಿ ಪ್ರಯಾಣಿಸಬಹುದಾಗಿದೆ. (ಅಂತರಾಜ್ಯ ಸಾರಿಗೆಗಳನ್ನೊಳಗೊಂಡಂತೆ).

 

 ಪಾಸ್ ವಿತರಿಸಲು ಅನುಸರಿಸುವ ವಿಧಾನಗಳು:

> ಪೂರ್ಣ ಅಂಧತ್ವ ಹೊಂದಿರುವ ಫಲಾನುಭವಿಗಳು ಸಂಬಂಧಿಸಿದ ವಿಭಾಗೀಯ ಕಛೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡುವುದು.

> ಅರ್ಜಿಯ ಜೊತೆಗೆ ನಿಗದಿಪಡಿಸಿದ ವೈದ್ಯಕೀಯ ಪ್ರಾಧಿಕಾರಗಳಿಂದ ಪಡೆದ ಪ್ರಮಾಣ ಪತ್ರ ಹಾಗೂ

ಗುರುತಿನ ಚೀಟಿಯನ್ನು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯ ಸಹಿಯೊಂದಿಗೆ ಪಡೆದ ಪ್ರಮಾಣ ಪತ್ರವನ್ನು ಹಾಗೂ ಗುರುತಿನ ಚೀಟಿಯನ್ನು ಸಲ್ಲಿಸುವುದು.

 

ಪ್ರಯಾಣಿಸುವ ಸೌಲಭ್ಯ ಮತ್ತು ಪಾಸ್ ಅವಧಿ:

> ಸದರಿ ಬಸ್ ಪಾಸ್‍ದಾರರಿಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಉಚಿತ ಪ್ರಯಾಣಿಸಲು ಅವಕಾಶವಿರುತ್ತದೆ.

> ಸದರಿ ಬಸ್ ಪಾಸ್ ಹೊಂದಿರುವ ಫಲಾನುಭವಿಗಳು ಕರ್ನಾಟಕ ರಾಜ್ಯದೊಳಗೆ ಎಲ್ಲೆಂದರಲ್ಲಿ ಪ್ರಯಾಣಿಸಬಹುದಾಗಿದೆ. (ಅಂತರಾಜ್ಯ ಸಾರಿಗೆಗಳನ್ನೊಳಗೊಂಡಂತೆ).

> ಅಂಧರ ಬಸ್ ಪಾಸ್‍ಗಳನ್ನು 5 ವರ್ಷಕ್ಕೊಮ್ಮೆ ನವೀಕರಿಸಲಾಗುತ್ತದೆ.

 

ಇತರೆ ನಿಬಂಧನೆಗಳು:

  ಸದರಿ ಪಾಸುದಾರರು ಪ್ರಯಾಣಿಸುವ ವೇಳೆಯಲ್ಲಿ ಕಡ್ಡಾಯವಾಗಿ ಬಸ್ ಪಾಸ್‍ಗಳನ್ನು ಹೊಂದಿರಬೇಕು, ಬಸ್‍ನಲ್ಲಿ ಚಾಲಕ/ನಿರ್ವಾಹಕರು ಹಾಗೂ ವಾಹನದ ತಪಾಸಣಾ ಅಧಿಕಾರಿಗಳು ಪರಿಶೀಲನೆಗಾಗಿ ವಿಚಾರಿಸಿದಾಗ ಸದರಿ ಬಸ್ ಪಾಸ್‍ನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.

 

3. ಸ್ವಾತಂತ್ರ್ಯ ಹೋರಾಟಗಾರರ ಬಸ್ ಪಾಸ್

 

ಕರ್ನಾಟಕ ಸರ್ಕಾರದ ಆದೇಶದಂತೆ ಸರ್ಕಾರದಿಂದ ಪಿಂಚಣಿ ಪಡೆಯುವ ಕರ್ನಾಟಕದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಸ್ಥೆಯು ಉಚಿತ ಬಸ್ ಪಾಸ್ ನೀಡುತ್ತಿದೆ.  ಸದರಿ ಸ್ವಾತಂತ್ರ್ಯ ಹೋರಾಟಗಾರರು ಸಂಸ್ಥೆಯ ಯಾವುದೇ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.  ಸದರಿ ಪಾಸ್ ಹೊಂದಿದವರು ಸಂಸ್ಥೆಯ ಎಲ್ಲಾ ಸೇವೆಗಳನ್ನೊಳಗೊಂಡಂತೆ ಅಂತರ ರಾಜ್ಯ ಸಾರಿಗೆಗಳಲ್ಲಿಯೂ ಪ್ರಯಾಣಿಸಬಹುದಾಗಿದೆ. ಸ್ವಾತಂತ್ರ್ಯ ಹೋರಾಟಗಾರರು 75 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಲ್ಲಿ ಅವರು ಓರ್ವ ಸಹಾಯಕರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. 

 

ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರಿಗೆ ವಿತರಿಸುವ ಉಚಿತ ಕೋಪನ:

ಕ.ಕ.ರ.ಸಾ.ನಿಗಮವು ಸರ್ಕಾರದ ಆದೇಶದ ಮೇರೆಗೆ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ / ವಿಧವಾ ಪತ್ನಿಯರಿಗೆ ವಾರ್ಷಿಕ ರೂ. 2000.00 ಮೌಲ್ಯದ ಉಚಿತ ಕೋಪನ್‍ಗಳನ್ನು ವಿತರಿಸಲಾಗುತ್ತಿದೆ.

 

ಇತ್ತೀಚಿನ ನವೀಕರಣ​ : 14-07-2021 12:37 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080