ಪೀಠಿಕೆ :
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ಪ್ರಯಾಣಿಕರ ಲಗೇಜ್ ಸರಕುಗಳನ್ನು ಸಾಗಿಸುವ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಲಗೇಜ್ಗಳನ್ನು ಕೊಂಡೊಯ್ಯುವಾಗ ಈ ಕೆಳಕಾಣಿಸಿದ ನಿಯಮಗಳನ್ನು ಪಾಲಿಸಬೇಕು.
I . ಲಗೇಜ್ಗಳ ವರ್ಗೀಕರಣ:
1. ಹಗುರ ಲಗೇಜ್
> ಕಡಿಮೆ ತೂಕವಿರುವ ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ಆಕ್ರಮಿಸುವ ಲಗೇಜ್ಗಳಿಗೆ ಪ್ರತಿ 10 ಕೆ.ಜಿ.ಗೆ ಒಂದು ಯುನಿಟ್ ಎಂದು ಪರಿಗಣಿಸುವುದು.
> ಪ್ರೇಸ್ ಮಾಡದ ಕಾಟನ್ ಬೇಲ್ಗಳು
> ಅಲ್ಯೂಮಿನಿಯಂ ಪಾತ್ರೆಗಳು/ಪೈಪಗಳು
> ಪ್ಲಾಸ್ಟಿಗ್ ವಸ್ತುಗಳು/ಪೈಪ್ಗಳು/ಅಲಂಕಾರಿಕ ವಸ್ತುಗಳು ಇತ್ಯಾದಿ
> ಹೂವು, ಸೊಪ್ಪು, ಅಲಂಕಾರಿಕ ವಸ್ತುಗಳು ಇತ್ಯಾದಿ.
2. ಭಾರವಾದ ಲಗೇಜ್:
> ಭಾರವಾದ ಲಗೇಜ್ನ್ನು 20 ಕೆಜಿಗೆ ಒಂದು ಯುನಿಟ್ ಎಂದು ಪರಿಗಣಿಸುವುದು.
> ಕೃಷಿ ಉತ್ಪನ್ಗಳು/ತರಕಾರಿ/ಹಣ್ಣುಗಳು
> ಗೊಬ್ಬರ
> ಧಾನ್ಯಗಳು/ಬೀಜಗಳು
> ಮೋಟಾರುಗಳು/ಪಂಪುಗಳು/ಕಬ್ಬಿಣದ ಪೈಪಗಳು
> ಸೂಟ್ಕೇಸ, ಬ್ಯಾಗ್ ಇತ್ಯಾದಿ ಲಗೇಜ್ಗಳು
3. ಸಾಗಿಸಲು ಸಾಧ್ಯವಿರುವಂತಹ ವಸ್ತುಗಳು
> ಟ್ರಕ್ ಟೈರ್-3 ಯುನಿಟ್ಗಳು (60 ಕೆಜಿ)
> ರೆಫ್ರೀಜರೇಟರ್/ಬೈಸಿಕಲ್/ವಾಸಿಂಗ್ ಮಷಿನ್/ವೀಣೆ/ಕಾರ್ ಎರಡು ಯುನಿಟ್ಗಳು (40 ಕೆಜಿ)
> ಟೇಬಲ್ ಫ್ಯಾನ್/ಹಾರ್ಮೋನಿಯಂ/ಟಿವಿ/ಕಂಪ್ಯೊಟರ್ ಮಾನಿಟರ್, ಸಿಪಿಯು/ಬ್ಯಾಟರಿ/25 ಲೀಟರ್ ಖಾಲಿ ಕಂಟೈನರ್-01 ಯುನಿಟ್ (20 ಕೆಜಿ).
4. ಸಾಕು ಪ್ರಾಣಿಗಳು:
> ಸಾಕು ಪ್ರಾಣಿಗಳನ್ನು ಸಂಸ್ಥೆಯ ನಗರ/ಉಪನಗರ/ಸಾಮಾನ್ಯ/ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಿಸಲು ಅವಕಾಶವಿರುತ್ತದೆ. ಆದರೆ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ, ಎಸಿ ಸ್ಲೀಪರ್ ಸಾರಿಗೆಗಳಲ್ಲಿ ಸಾಗಿಸಲು ಅವಕಾಶವಿರುವುದಿಲ್ಲ.
> ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾಧಿಗಳಿಗೆ ಮಕ್ಕಳ ದರ ವಿಧಿಸುವುದು.
> ಸಾಕು ಪ್ರಾಣಿಗಳನ್ನು ವಾರಸ್ಸುದಾರರ ಸ್ವಂತ ಜವಾಬ್ದಾರದ ಮೇಲೆ ತೆಗೆದುಕೊಂಡು ಹೋಗಬೇಕು, ಸಾಕು ಪ್ರಾರಣಿಗಳನ್ನು ಪಂಜರದಲ್ಲಿ ಹಾಗೂ ಚೈನ್ದಿಂದ ಬಿಗಿದು ಸಾಗಿಸಬೇಕು.
> ಸಾಕು ಪ್ರಾಣಿ ವಾರಸ್ಸುದಾರರು ಸದರಿ ಪ್ರಾಣಿಯಿಂದ ಇತರೆ ಪ್ರಯಾಣಿಕರಿಗೆ ಅಥವಾ ಸಂಸ್ಥೆಯ ಸಿಬ್ಬಂದಿಗಳಿಗೆ ಅಥವಾ ಲಗೇಜ್ಗೆ ಹಾನಿಯಾಗದ ರೀತಿ ಕಾಳಜಿ ವಹಿಸತಕ್ಕದ್ದು.
5. ರೇಷ್ಮೆ ಗೂಡು:
> ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ ಒಂದು ಯುನಿಟ್ನಂತೆ ಪರಿಗಣಿಸುವುದು.
6. ಉಚಿತ ಸಾಗಣೆ:
> ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ. ಮಕ್ಕಳು 15 ಕೆಜಿ ತೂಕದವರೆಗೆ ಲಗೇಜ್ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುತ್ತದೆ.
> ಉಚಿತ ಲಗೇಜ್ ಮಿತಿಯು ಪ್ರಯಾಣಿಕರ ವೈಯಕ್ತಿಕ ವಾಣಿಜ್ಯೇತರ ವಸ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ವಸ್ತುಗಳು ಮತ್ತು ಸಾಗಿಸಲು ಸಾಧ್ಯವಿರುವಂತಹ ವಸ್ತುಗಳಿಗೆ ಲಗೇಜ್ ಶುಲ್ಕ ಅನ್ವಯಿಸುತ್ತದೆ.
> ಒಂದು ವೇಳೆ ಅವಕಾಶಕ್ಕಿಂತ ಹೆಚ್ಚಿನ ತೂಕದ ಲಗೇಜ್ ಕೊಂಡೊಯ್ಯುವ ಪ್ರಯಾಣಿಕರಿಗೆ ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ ಹೊರತುಪಡಿಸಿ ಉಳಿದ ಲಗೇಜ್ಗೆ ದರ ವಿಧಿಸುವುದು.
> ಪ್ರಯಾಣಿಕರು 4 ಅಥವಾ 5 ಜನರು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದು, ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತಿದ್ದಲ್ಲಿ ಸದರಿ ಪ್ರಯಾಣಿಕರು ತಲಾ 30 ಕೆಜಿ ವೈಯಕ್ತಿಕ ಲಗೇಜ್ನ್ನು ಕೊಂಡೊಯ್ಯಬಹುದು. ಪ್ರಯಾಣಿಕರ ಬ್ಯಾಗ್ನ ತೂಕ 30 ಕೆಜಿ ಮೀರಿದಲ್ಲಿ ಅದನ್ನು ವಾಣಿಜ್ಯ ಲಗೇಜ್ ಎಂದು ಪರಿಗಣಿಸಿ ಲಗೇಜ್ ಶುಲ್ಕ ವಿಧಿಸಲಾಗುವುದು.
I I. ಲಗೇಜ್ ದರ:
> ಉಚಿತವಾಗಿ ಕೊಂಡೊಯ್ಯಲು ಅವಕಾಶವಿರುವ ಲಗೇಜ್ನ್ನು ಹೊರತುಪಡಿಸಿ ಇತರೆ ಲಗೇಜ್ಗಳಿಗೆ ಕೆಳಕಂಡಂತೆ ಒಂದು ಯುನಿಟ್ಗೆ ದರ ವಿಧಿಸುವುದು.
ಕ್ರ.ಸಂ.
|
ವಾಹನದ ಮಾದರಿ
|
ಪ್ರತಿ ಹಂತಕ್ಕೆ ದರ (ರೂ.ಗಳಲ್ಲಿ)
|
ಕನಿಷ್ಠ ದರ (ರೂ.ಗಳಲ್ಲಿ)
|
1
|
ಹವಾನಿಯಂತ್ರ್ರಣ ರಹಿತ ಬಸ್ಸುಗಳು (ಈಶಾನ್ಯ ಕರ್ನಾಟಕ ಸಾರಿಗೆ, ಸುಹಾಸ, ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ನಗರ ಸಾರಿಗೆ)
|
0.75
|
5
|
2
|
ಹವಾ ನಿಯಂತ್ರಿತ ವಾಹನಗಳು (ಕರೋನಾ ಮತ್ತು ಎಸಿ ಸ್ಲೀಪರ್)
|
1
|
10
|
> ಈ ದರಗಳು ಪ್ರಯಾಣಿಕರು ಜೊತೆಗಿಲ್ಲದೆ ಸಾಗಿಸುವ ಸರಕಿಗೂ ಹಾಗೂ ಅಂತರ ರಾಜ್ಯದಲ್ಲಿ ಸಾಗಿಸಲ್ಪಡುವ ಸರಕಿಗೂ ಅನ್ವಯವಾಗಲಿದೆ.
> ದಿನ ಪತ್ರಿಕೆಗಳಿಗೆ 5 ಕೆಜಿಗೆ ಒಂದು ಯುನಿಟ್ ಎಂದು ಪರಿಗಣಿಸಿ ಒಂದು ಪೇಪರ್ ಬಂಡಲ್ನ್ನು ದೂರದ ಮಿತಿ ಇಲ್ಲದೆ ಸಾಗಿಸಲು ರೂ. 5/- ದರ ವಿಧಿಸುವುದು.
I I I . ಸಂಸ್ಥೆಯ ವಾಹನಗಳಲ್ಲಿ ಸಾಗಿಸಲು ನಿಷೇದಿಸಲ್ಪಟ್ಟ ವಸ್ತುಗಳು
1. ಪೆಟ್ರೋಲ್, ಗ್ಯಾಸ್ ಡಿಸೇಲ್, ಕೆರೋಸಿನ್
|
17. ಬ್ಯಾಟರಿಗಳು, (Dry Batteries)
|
2. ಮದ್ಯಪಾನಿಯಗಳು
|
18 ಕಲ್ಲಿದ್ದಲು
|
3. ಗ್ಯಾಸೋಲಿನ್
|
19. ಪ್ಯಾಕ್ ಮಾಡದ ಹತ್ತಿ
|
4. ಸ್ಪಿರಿಟ್, ಟರಪೆಂಟೈನ್
|
20. ಪ್ಯಾಕ್ ಮಾಡದ ಒಣಗಿದ ಎಲೆಗಳು
|
5. ಆಸಿಡ್
|
21. ಗನ್ನುಗಳು ಮತ್ತು ತೋಟಾಗಳು
|
6. ಸಲ್ಫರ್
|
22. ಸಂಸ್ಕರಿಸಿದ ಚರ್ಮ,ತುಪ್ಪಳ ಕೂದಲು
|
7. ಕೋಲ್ಟಾರ್
|
23. ಪ್ಯಾಕ್ ಮಾಡದ ಉಲ್ಲನ್ ವಸ್ತುಗಳು
|
8. ಗನ್ಪೌಡರ್
|
24. ದುರ್ವಾಸನೆ ಕೂಡಿದ ಪದಾರ್ಥಗಳು
|
9. ಹಸಿ/ಒಣಗಿದ ಮೀನುಗಳು
|
25. ಅಳಿವಿನ ಅಂಚಿನಲ್ಲಿರುವ ಪ್ರಾಣಿ/ಪಕ್ಷಿ ಹಾಗೂ ಇತರೆ ಸರಿಸೃಪಗಳು
|
10. ಪಟಾಕಿ/ಸಿಡಿಮದ್ದುಗಳು
|
26. ವಿಷಕಾರಿ ಜೀವ ಜಂತುಗಳು (ಹಾವು ಮತ್ತು ಇತರೆ)
|
11. ಅಫೀಮ್/ನಶೆ ವಸ್ತುಗಳು
|
27. ಕರ್ಪೂರ ಇತ್ಯಾದಿ, ಸುಲಭವಾಗಿ ಹತ್ತಿಕೊಳ್ಳುವ ಪದಾರ್ಥಗಳು
|
12. ಗ್ಯಾಸ್ ಸಿಲೆಂಡರ್
|
28. ಕಾನೂನಿನ ಪ್ರಕಾರ ನಿಷೇದಿಸಲ್ಪಟ್ಟ ಹಾಗೂ ಹಾನಿಯ ಇತರೆ ವಸ್ತುಗಳು
|
13.ಮೃತದೇಹಗಳು (ಕಳೇಬರ)
|
|
14. ಪರವಾನಗಿ ಇಲ್ಲದ ಅರಣ್ಯ ಉತ್ಪನ್ನಗಳು
|
|
15. ಮೂಳೆ/ಕೊಂಬುಗಳು
|
|
16. ಸಾಕು ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಪ್ರಾಣಿಗಳು.
|
|
> ಸ್ಥಳಾವಕಾಶದ ಲಭ್ಯತೆಯ ಮೇರೆಗೆ ಲಗೇಜ್ ಕೊಂಡೊಯ್ಯುಲು ಅವಕಾಶ ಕಲ್ಪಿಸಲಾಗಿದೆ.
> ಆಕ್ರಮಣಕಾರಿ ನಿಷಿದ್ದ, ಸ್ಪೋಟಕ್, ಸುಲಭವಾಗಿ ಹೊತ್ತ್ತಿಕೊಳ್ಳುವ ಪದಾರ್ಥಗಳು ಅಥವಾ ಇತರೆ ಅಪಾಯಕಾರಿ ವಸ್ತುಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಕೊಂಡೊಯ್ಯುಲು ಅವಕಾಶಗಳಿರುವುದಿಲ್ಲ.
> ಸರಕುಗಳು ಹಾಳಾದಲ್ಲಿ ಸಂಸ್ಥೆಯು ಜವಾಬ್ದಾರಿಯಲ್ಲ.
> ಅನೀರಿಕ್ಷಿತ ಘಟನೆಗಳಿಂದ/ಅಪಘಾತಗಳಿಂದ/ಲಗೇಜ್ ಕಳವು ಹಾನಿಯುಂಟಾದಲ್ಲಿ ಸಂಸ್ಥೆಯು ಜವಾಬ್ದಾರಿಯಾಗಿರುವುದಿಲ್ಲ.
> ಲಗೇಜ್ನಲ್ಲಿರುವ ವಸ್ತುಗಳ ಬಗ್ಗೆ ಗುಮಾನಿ ಬಂದಲ್ಲಿ, ಸಂಸ್ಥೆಯ ಸಿಬ್ಬಂದಿಗಳು ಪರಿಶೀಲನೆ ನಡೆಸುವ ಅಧಿಕಾರ ಹೊಂದಿರುತ್ತಾರೆ.
> ಪ್ರಯಾಣಿಕರು ಅಥವಾ ಸಂಸ್ಥೆಯ ಸಿಬ್ಬಂದಿಗಳು ಚಲಿಸಲು ಅನಾನುಕೂಲವಾಗುವ ರೀತಿಯಲ್ಲಿ ಮತ್ತು ಚಾಲಕರ ಕ್ಯಾಬಿನ್ನಲ್ಲಿ ಯಾವುದೇ ಸಂದರ್ಭಗಳಲ್ಲಿಯೂ ಲಗೇಜ್ ಕೊಂಡೊಯ್ಯುವಂತಿಲ್ಲ.
> ಬಸ್ಸಿನಲ್ಲಿ ಕೊಂಡೊಯ್ಯುತ್ತಿರುವ ಲಗೇಜ್ಗೆ ಮೊದಲ ಸ್ಥಳದಲ್ಲಿಯೇ ದರ ವಿಧಿಸದೇ ಲಗೇಜ್ ಚೀಟಿಯನ್ನು ಪಡೆಯದಿದ್ದಲ್ಲಿ, ನಿರ್ಧಿಷ್ಟ ಲಗೇಜ್ನ್ನು ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸಲಾಗುವುದು.