ಅಭಿಪ್ರಾಯ / ಸಲಹೆಗಳು

ಚಾರ್ಟೆಡ್‌ ಸೇವೆ

ಪೀಠಿಕೆ :

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಚಾರ್ಟರ್ಡ್ ಆಧಾರದ ಮೇಲೆ ಬಸ್ಸುಗಳನ್ನು ಒದಗಿಸುತ್ತದೆ; ಚಾರ್ಟರ್ಡ್ ಕಾಂಟ್ರಾಕ್ಟ್ ಸೇವೆಗಳು ಎಂದರೆ ನಿಗದಿತ ಪ್ರಯಾಣಿಕರ ಗುಂಪಿಗೆ ನಿಗದಿತ ಮಾರ್ಗದಲ್ಲಿ ನಿಗದಿತ ಸಮಯಕ್ಕೆ ಸೇವೆಗಳ ದಿನನಿತ್ಯದ ಕಾರ್ಯಾಚರಣೆ ಮಾಡುವುದು. ಈ ಸೇವೆಗಳು ಶಾಲೆಗಳ / ಕಾಲೇಜುಗಳ ವಿದ್ಯಾರ್ಥಿಗಳ ಮತ್ತು ಖಾಸಗಿ ಕಾರ್ಖಾನೆಗಳ, ಕಚೇರಿಗಳ, ಖಾಸಗಿ ಕಂಪನಿಗಳ, ಸಾರ್ವಜನಿಕ ಸಂಸ್ಥೆಗಳ ನೌಕರರ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ಮಿಸಲ್ಪಟ್ಟಿವೆ.

 

ಖಾಯಂ ಗುತ್ತಿಗೆ ಮೇಲೆ ಒದಗಿಸುವ ಬಸ್ಸಿನ ದರಗಳು:

     - ಖಾಯಂ ಗುತ್ತಿಗೆ (Chartered Contract) ಮೇಲೆ ಬಸ್ಸುಗಳನ್ನು ಒದಗಿಸುವಾಗ ಈ ಕೆಳಕಂಡಂತೆ ಪ್ರತಿ ಕಿ.ಮೀ.ಗಳಿಗೆ ದರಗಳನ್ನು ವಿಧಿಸಲಾಗುವುದು.

 

ಕ್ರ.ಸಂ. ಬಸ್ಸಿನ ವಿಧ ಪ್ರತಿ ಕಿ.ಮೀ. ದರ (ರೂ.ಗಳಲ್ಲಿ)
1 ಕರ್ನಾಟಕ ಸಾರಿಗೆ/ಸೆಮಿ ಲೋ-ಫ್ಲೋರ್ (ನಗರ ಸಾರಿಗೆ)/ ನಗರ ಸಾರಿಗೆ (12 ಮೀಟರ್ ಚಾಸ್ಸಿ)* 37
2 ಮಿಡಿ ಬಸ್* 32
3 ರಾಜಹಂಸ 43

 

  

ಮಹತ್ವದ ನೀತಿ ನಿಬಂಧನೆಗಳು:

       - ಖಾಯಂ ಗುತ್ತಿಗೆ ವಾಹನದ ಕಿ.ಮೀ.ನ್ನು ಕಾರ್ಯಾಚರಣೆ ಪ್ರಾರಂಭವಾದ ಘಟಕದಿಂದ ಪ್ರಾರಂಭಿಸಿ ನಿಗದಿಪಡಿಸಿದ ಮಾರ್ಗ ತಲುಪಿ ಮರಳಿ ಘಟಕ್ಕೆ ಆಗಮಿಸಿದ ಕಿ.ಮೀ.ಗಳನ್ನು ಲೆಕ್ಕಾಚಾರಕ್ಕೆ ತೆಗೆದುಕೊಳ್ಳಲಾಗುವುದು.

 

       - ಶಾಲೆ/ಕಾಲೇಜುಗಳಿಗೆ ಎಲ್ಲಾ ಮಾದರಿ ವಾಹನಗಳಿಗೆ ಪ್ರತಿ ಕಿ.ಮೀ.ಗೆ ರೂ. 2/- ರಂತೆ ರಿಯಾಯಿತಿ ನೀಡಲಾಗುವುದು.

 

       -ಸರಕು ಮತ್ತು ಸೇವಾ ತೆರಿಗೆ ಶುಲ್ಕ ನಾನ್ ಎಸಿ ಬಸ್ಸುಗಳಿಗೆ ಅನ್ವಯಿಸುವುದಿಲ್ಲ. ಎಸಿ ಸ್ಲೀಪರ್ ಸಾರಿಗೆಗಳಿಗೆ ಒಟ್ಟು ಮೊತ್ತದ ಮೇಲೆ 5% ರಷ್ಟು ಸರಕು ಮತ್ತು    ಸೇವಾ ತೆರಿಗೆ ಶುಲ್ಕ ವಿಧಿಸಲಾಗುವುದು.

 

ಇತ್ತೀಚಿನ ನವೀಕರಣ​ : 14-07-2021 12:59 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080