ಅಭಿಪ್ರಾಯ / ಸಲಹೆಗಳು

ಸಾಂದರ್ಭಿಕ ಒಪ್ಪಂದ ಸೇವೆ

ಪೀಠಿಕೆ:

ಪ್ರವಾಸಗಳು, ಮದುವೆಗಳು, ಶಾಲೆಗಳ ಮತ್ತು ಕಾಲೇಜುಗಳ ಅಧ್ಯಯನ ಪ್ರವಾಸಗಳು / ವಿಹಾರಗಳಿಗಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕ್ಯಾಶುಯಲ್ ಕಾಂಟ್ರಾಕ್ಟ್ ಆಧಾರದ ಮೇಲೆ ಬಸ್ಸುಗಳನ್ನು ಬಾಡಿಗೆಗೆ ಒದಗಿಸುತ್ತಿದೆ. ಬಸ್ಸುಗಳನ್ನು ಪ್ರತಿ ಕಿ.ಮೀ ಆಧಾರದ ಮೇಲೆ ಕನಿಷ್ಠ ಕಿ.ಮೀ.ಗೆ 24 ಗಂಟೆಗಳ ಅವಧಿಗೆ ಒದಗಿಸಲಾಗುತ್ತಿದೆ. 

 

ಸಾಂದರ್ಭಿಕ ಒಪ್ಪಂದದ ಮೇಲೆ ನೀಡುವ ವಾಹನಗಳ ದರದ ವಿವರಗಳು ದಿ.07-03-2019 ರಂತೆ ಕೆಳಗಿನಂತಿರುತ್ತವೆ.

 * ಈ ಕೆಳಗಿನ ದರಗಳಿಗೆ ಹೆಚ್ಚುವರಿಯಾಗಿ ಪ್ರತಿ ವಾಹನಕ್ಕೆ ರೂ. 50/- ಅಪಘಾತ ಪರಿಹಾರ ನಿಧಿ ಶುಲ್ಕ ವಿಧಿಸಲಾಗುವುದು.

 

ವಾಹನ ಮಾದರಿ

ಆಸನಗಳ ಸಂಖ್ಯೆ

ದಿನಕ್ಕೆ ಕನಿಷ್ಠ ಪ್ರಯಾಣದ ಕಿ.ಮೀ.

ಪ್ರತಿ ಕಿ.ಮೀ. ದರ

ವಾರದ ಕೊನೆ ದಿನಗಳು

ವಾರದ ದಿನಗಳು

(ಶುಕ್ರವಾರದಿಂದ ರವಿವಾರ)

(ಸೋಮವಾರ ದಿಂದ ಗುರುವಾರ)

ರಾಜ್ಯದೊಳಗೆ

ಅಂತರ ರಾಜ್ಯ

ರಾಜ್ಯದೊಳಗೆ

ಅಂತರ ರಾಜ್ಯ

ಈಶಾನ್ಯ ಕರ್ನಾಟಕ ಸಾರಿಗೆ

55/47/49

300

39

41

39

41

ರಾಜಹಂಸ ಎಕ್ಸಿಕ್ಯೂಟಿವ್/ ಸುಹಾಸ

36

300

40

45

40

45

ರಾಜಹಂಸ

39

300

43

47

43

47

ರಾಜಹಂಸ (12 ಮೀ.ಚಾಸ್ಸಿ)

44

300

45

49

45

49

ಮಿಡಿ ಬಸ್

30

250

32

ಅನ್ವಯಿಸುವುದಿಲ್ಲ

32

ಅನ್ವಯಿಸುವುದಿಲ್ಲ

ಸ್ಲೀಪರ್ ನಾನ್ ಎಸಿ

32/30

400

53

58

53

58

ಸ್ಲೀಪರ್ ಎಸಿ

32/30

400

75

81

75

81

 

 

ಮಹತ್ವದ ನೀತಿ ನಿಬಂಧನೆಗಳು:

1. ವಾರದ ದಿನಗಳಲ್ಲಿ ಅಂದರೆ ಸೋಮವಾರದಿಂದ ಗುರುವಾರದವರೆಗೆ ಕಾರ್ಯಾಚರಿಸುವ ಕರಾರು ಒಪ್ಪಂದದ ಸಾರಿಗೆಗಳಿಗೆ ವಾರದ ದಿನಗಳ ದರ  ಅನ್ವಯಿಸುತ್ತದೆ.

2. ವಾರದ ಕೊನೆಯ ದಿನಗಳು ಅಂದರೆ ಶುಕ್ರವಾರದಿಂದ ರವಿವಾರದವರೆಗೆ ಕಾರ್ಯಾಚರಿಸುವ ಕರಾರು ಒಪ್ಪಂದದ ಸಾರಿಗೆಗಳಿಗೆ ವಾರದ ಕೊನೆಯ ದಿನದ ದರಗಳು ಅನ್ವಯಿಸುತ್ತವೆ.

3. ಮಾನ್ಯತೆ ಪಡೆದ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ ಚಾಲ್ತಿಯಲ್ಲಿರುವ ದರಗಳಲ್ಲಿ ಪ್ರತಿ ಕಿ.ಮೀ. ಗೆ ರೂ. 2/- ರಿಯಾಯಿತಿಯನ್ನು ಅಂತರ ರಾಜ್ಯ ಒಪ್ಪಂದ ವಾಹನಗಳಿಗೂ ಸೇರಿದಂತೆ ಒದಗಿಸಲಾಗುವುದು.

4. ಕರಾರು ಒಪ್ಪಂದದ ವಾಹನದ ಕಿ.ಮೀ.ನ್ನು ಕಾರ್ಯಾಚರಣೆ ಪ್ರಾರಂಭವಾದ ಘಟಕದಿಂದ ಪ್ರಾರಂಭಿಸಿ ನಿಗದಿಪಡಿಸಿದ ಮಾರ್ಗ ತಲುಪಿ ಮರಳಿ ಘಟಕಕ್ಕ್ಕೆ ಆಗಮಿಸಿದ ಕಿ.ಮೀ.ಗಳನ್ನು ಲೆಕ್ಕಾಚಾರಕ್ಕೆ ತೆಗೆದುಕೊಳ್ಳಲಾಗುವುದು.

5. ಕರಾರು ಒಪ್ಪಂದದ ವಾಹನಗಳನ್ನು 3 ದಿನಗಳ ಮುಂಚಿತವಾಗಿ ಪ್ರವಾಸದ ಕಾರ್ಯಕ್ರಮದ ಸಂಪೂರ್ಣ ವಿವರದೊಂದಿಗೆ ಕಾಯ್ದಿರಿಸಿಕೊಳ್ಳುವುದು.

6. ಬಸ್ಸುಗಳನ್ನು ಲಭ್ಯತೆಗನುಗುಣವಾಗಿ ಕರಾರು ಒಪ್ಪಂದಕ್ಕೆ ಕಾಯ್ದಿರಿಸಲಾಗುವುದು.

7. ಸಾಂದರ್ಭಿಕ ಒಪ್ಪಂದದ ಕಾರ್ಯಕ್ರಮದನ್ವಯ ಒಪ್ಪಂದದ ದಿನಗಳು, ಕ್ರಮಿಸುವ ದೂರು, ಇತ್ಯಾಧಿಗಳನ್ನೊಳಗೊಂಡು ಲೆಕ್ಕಾಚಾರವನ್ನು ಮೊದಲೇ ಮಾಡಿ ಕಾರ್ಯಾಚರಣೆಯ ಪೂರ್ತಿ ಮೊತ್ತವನ್ನು ಹಾಗೂ ಅದರ ಮೇಲೆ ಶೇ.20 ರಷ್ಟು ಮೊತ್ತವನ್ನು ಭಧ್ರತಾ ಠೇವಣಿಯಾಗಿ ಪಾವತಿಸಿಕೊಳ್ಳಲಾಗುವುದು.

8. ಟೋಲ್ ಫೀ, ಪ್ರವೇಶ ಫೀ ಮತ್ತು ಇತರೆ ಶುಲ್ಕಗಳನ್ನು ಕರಾರು ಒಪ್ಪಂದದ ಒಪ್ಪಂದದಾರರೇ ಭರಿಸುವುದು.

9. ಅಂತರ ರಾಜ್ಯ ಕಾರ್ಯಾಚರಣೆಗೆ ಒಪ್ಪಂದದ ಮೇಲೆ ವಾಹನಗಳನ್ನು ನೀಡುವಾಗ ಬೇಸಿಕ್ ಪರಮಿಟ್ ಪಡೆಯಲು ಭರಿಸಬೇಕಾದ ಶುಲ್ಕ ಮತ್ತು ಸ್ಟೇಶನರಿ ಚಾರ್ಜಸ್ ರೂ. 100/- ನ್ನು ಪಾವತಿಸಿಕೊಳ್ಳಲಾಗುವುದು.

10. ಅಂತರ ರಾಜ್ಯದಲ್ಲಿ ಇತರೆ ತೆರಿಗೆ ಇತ್ಯಾಧಿಗಳಿದ್ದಲ್ಲಿ ಒಪ್ಪಂದದಾರರೇ ಭರಿಸುವುದು.

11. ಅಂತರ ರಾಜ್ಯ ಸ್ಥಳಗಳಿಗೆ ವಾಹನವನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರ ಹೆಸರು/ವಯಸ್ಸಿನ ಪಟ್ಟಿಯನ್ನು ಪಡೆಯುವುದು ಕಡ್ಡಾಯವಿರುತ್ತದೆ.

12. ಒಂದು ದಿನ ಅಂದರೆ ಘಟಕದಿಂದ ನಿರ್ಗಮನವಾದ ಸಮಯದಿಂದ 24 ಗಂಟೆ ಎಂದು ಪರಿಗಣಿಸಲಾಗುವುದು.

13. ಒಂದು ದಿನಕ್ಕಿಂತ ತಡವಾಗಿ ಘಟಕಕ್ಕೆ ಆಗಮಿಸಿದಲ್ಲಿ ಹೆಚ್ಚುವರಿ ಮೊತ್ತ ಪಾವತಿಸಿಕೊಳ್ಳಲಾಗುವುದು.

14. ನಾನ್ ಎಸಿ ಬಸ್ಸುಗಳಿಗೆ ಜಿಎಸ್‍ಟಿ ಅನ್ವಯಿಸುವುದಿಲ್ಲ.

15. ಎಸಿ ಸ್ಲೀಪರ್ ಬಸ್ಸುಗಳಿಗೆ ಸದರಿ ಮೊತ್ತದ ಮೇಲೆ ಶೇ.5 ರಷ್ಟು ಜಿಎಸ್‍ಟಿ ಪಾವತಿಸಲಾಗುವುದು.

 

ಒಪ್ಪಂದದ ರದ್ದತಿ:

ಒಪ್ಪಂದದ ಮೇಲೆ ಕಾಯ್ದಿರಿಸಿದ ವಾಹನವನ್ನು ರದ್ದುಪಡಿಸಿದಲ್ಲಿ ವಿಧಿಸಬೇಕಾದ ದರಗಳು ಈ ಕೆಳಗಿನಂತಿರುತ್ತವೆ.

 

ಒಪ್ಪಂದದ ಮೇಲೆ ಕಾಯ್ದಿರಿಸಿದ ವಾಹನ ರದ್ದುಪಡಿಸಿದ ಸಮಯ

ರದ್ದುಪಡಿಸಿದಾಗ ವಿಧಿಸಬೇಕಾದ ರದ್ದತಿ ಶುಲ್ಕ

ವಾಹನ ಹೊರಡಬೇಕಾದ 24 ಗಂಟೆಗಳ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ.

ಒಪ್ಪಂದದ ಮೇಲೆ ವಿಧಿಸಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.10 ರಷ್ಟು + ಅಂತರ ರಾಜ್ಯ ಪರಮಿಟ್ ಶುಲ್ಕವೇನಾದರು ಇದ್ದರೆ ಅದರ ಮೊತ್ತ.

ವಾಹನ ಹೊರಡಬೇಕಾದ ಒಂದು ಗಂಟೆಯ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ

ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸದ ಕನಿಷ್ಠ ದರದ ಶೇ.25 ರಷ್ಟು + ಅಂತರ ರಾಜ್ಯ ಪರಮಿಟ್ ಶುಲ್ಕವೇನಾದರು ಇದ್ದರೆ ಅದರ ಮೊತ್ತ

ವಾಹನ ಹೊರಡಬೇಕಾದ ಸಮಯದ ನಂತರ ಹಾಗೂ ವಾಹನ ಘಟಕದಿಂದ ಹೊರಡುವ ಮುಂಚಿತವಾಗಿ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ.

ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.50 ರಷ್ಟು + ಅಂತರ ರಾಜ್ಯ ಪರಮಿಟ್ ಶುಲ್ಕವೇನಾದರು ಇದ್ದರೆ ಅದರ ಮೊತ್ತ

ವಾಹನವು ಘಟಕದಿಂದ ಹೊರಟ ನಂತರ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ

ಒಂದು ದಿನದ ಕನಿಷ್ಠ ದರವನ್ನು ವಿಧಿಸುವುದು + ಅಂತರ ರಾಜ್ಯ ಪರಮಿಟ್ ಶುಲ್ಕವೇನಾದರು ಇದ್ದರೆ ಅದರ ಮೊತ್ತ

 

ಇತ್ತೀಚಿನ ನವೀಕರಣ​ : 26-05-2020 11:19 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080