ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಇತಿಹಾಸ

ಅಂದಿನ ಮೈಸೂರು ರಾಜ್ಯದ ಪ್ರಯಾಣಿಕರ ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆಯನ್ನು (MGRTD) 12 ನೇ ಸೆಪ್ಟೆಂಬರ್ 1948 ರಂದು 120 ಬಸ್ಸುಗಳೊಂದಿಗೆ ಉದ್ಘಾಟಿಸಲಾಯಿತು.

 

ಮೈಸೂರು ಸರ್ಕಾರದ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಸಾರಿಗೆಯನ್ನು ತರುವಾಯ 1961 ರ ಆಗಸ್ಟ್ 1 ರಂದು ರಸ್ತೆ ಸಾರಿಗೆ ನಿಗಮ ಕಾಯ್ದೆ-1950 ರ ಸೆಕ್ಷನ್ 3ರ ಪ್ರಕಾರ ಸ್ವತಂತ್ರ ನಿಗಮವನ್ನಾಗಿ ಪರಿವರ್ತಿಸಲಾಯಿತು ಹಾಗೂ ಎಂ.ಎಸ್.ಆರ್. ಟಿ.ಸಿ (ಈಗ ಕೆ.ಎಸ್.ಆರ್.ಟಿ.ಸಿ) ಎಂದು ಹೆಸರಿಸಲಾಯಿತು.

 

ಕ.ರಾ.ರ.ಸಾ ಸಂಸ್ಥೆ ವಿಭಜನೆ / ಈ.ಕ.ರಾ.ಸಾ.ಸಂಸ್ಥೆ ರಚನೆ

 

ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆಯನ್ನು ಒದಗಿಸಲು ಹಾಗೂ ನಿಗಮದ ಕಾರ್ಯಾಚರಣೆಗಳ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಹೊಂದಲು, ರಾಜ್ಯ ಸರ್ಕಾರವು ಕ.ರಾ.ರ.ಸಾ ಸಂಸ್ಥೆ ಅನ್ನು ವಿಂಗಡಿಸಿ ಎರಡು ಹೊಸ ನಿಗಮಗಳನ್ನು ಅಂದರೆ, 15-08-1997 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಯಿತು. ನಂತರ ಕರ್ನಾಟಕ ರಾಜ್ಯದ ಈಶಾನ್ಯ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕ, ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಆರ್ಥಿಕವಾಗಿ ಅನುಕೂಲವಾಗುವ ಸಾರಿಗೆ ಸೌಲಭ್ಯವನ್ನು ಒದಗಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 15-08-2000 ರಂದು ಕಲಬುರಗಿಯಲ್ಲಿ ಸ್ಥಾಪಿಸಿ ದಿ. 01-10-2000 ರಂದು ಆರ್ಥಿಕವಾಗಿ ಸ್ವತಂತ್ರಗೊಳಿಸಲಾಯಿತು.

 

ಈ.ಕ.ರಾ.ಸಾ.ಸಂಸ್ಥೆ ಯನ್ನು "ಕ.ಕ.ರ.ಸಾ. ನಿಗಮ" : ಮರುನಾಮಕರಣ

 

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ದಿನಾಂಕ 06.07.2021 ರಂದು ರಾಜ್ಯ ಸರ್ಕಾರವು "ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ" ಎಂದು ಮರುನಾಮಕರಣ ಮಾಡಿದೆ.

 

ಕ.ಕ.ರ.ಸಾ. ನಿಗಮದ ಆಡಳಿತ ವ್ಯಾಪ್ತಿ

 

 

ಕ.ಕ.ರ.ಸಾ. ನಿಗಮದ ಬೆಳವಣಿಗೆ

 

ಪ್ರಾರಂಭದಲ್ಲಿ ಸಂಸ್ಥೆಯು ಕಲಬುರಗಿಯಲ್ಲಿ ಕೇಂದ್ರ ಕಛೇರಿಯೊಂದಿಗೆ 6 ವಿಭಾಗಗಳು, 26 ಡಿಪೋಗಳನ್ನು 74 ಬಸ್ ನಿಲ್ದಾಣಗಳು, 82 ವೇಸೈಡ್ ಶೆಲ್ಟರ್ ಮತ್ತು 26 ಸಿಟಿ ಶೆಲ್ಟರ್‌ಗಳನ್ನು ಹೊಂದಿ 2027 ವಾಹನಗಳಿಂದ 10,005 ಉದ್ಯೋಗಿಗಳೊಂದಿಗೆ ದಿನಕ್ಕೆ 1831  ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಿ 5.79 ಲಕ್ಷ ಕಿ.ಮೀ ಗಳನ್ನು ಕ್ರಮಿಸಿ 7.88 ಲಕ್ಷ ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು.

 

ಅಂದಿನಿಂದ ಸಂಸ್ಥೆಯು ಮಹತ್ತರವಾಗಿ ಬೆಳೆದಿದೆ. ಪ್ರಸ್ತುತ (2019-2020 ರಂತೆ) ಸಂಸ್ಥೆಯು ಕಲಬುರಗಿಯಲ್ಲಿ ಕೇಂದ್ರ ಕಛೇರಿಯೊಂದಿಗೆ  9 ವಿಭಾಗಗಳು, 53 ಡಿಪೋಗಳು, 152 ಬಸ್ ನಿಲ್ದಾಣಗಳು, 971 ವೇಸೈಡ್ ಶೆಲ್ಟರ್‌ಗಳು ಮತ್ತು 160 ನಗರ-ಸಾರಿಗೆ ಶೆಲ್ಟರ್‌ಗಳು, ಯಾದಗಿರನಲ್ಲಿ ಪ್ರಾದೇಶಿಕ ಕಾರ್ಯಾಗಾರ, ಹುಮನಾಬಾದ್ ನಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದೆ. 

 

ಪ್ರಸ್ತುತ 4700 ವಾಹನಗಳಿಂದ 20,574 ಉದ್ಯೋಗಿಗಳೊಂದಿಗೆ ದಿನಕ್ಕೆ 4254 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಿ ದಿನಕ್ಕೆ 13.87 ಲಕ್ಷ ಕಿ.ಮೀಗಳನ್ನು ಕ್ರಮಿಸಿ 13.58 ಲಕ್ಷ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಅಂತರ-ರಾಜ್ಯ ಸೇವೆಗಳಲ್ಲಿ ಮಹಾರಾಷ್ಟ್ರಕ್ಕೆ 434, ತೆಲಂಗಾಣಕ್ಕೆ 236, ಆಂಧ್ರಪ್ರದೇಶಕ್ಕೆ 139, ತಮಿಳ್ ನಾಡಿಗೆ  2 ಹಾಗೂ ಗೋವಾ ರಾಜ್ಯಕ್ಕೆ 40 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

 

 

ಇತ್ತೀಚಿನ ನವೀಕರಣ​ : 14-07-2021 12:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080